ಫ್ಲೋರಾ ಫೌಂಟೆನ್,, ನಿರ್ಮಾಣದ ಕೆಲಸ ೧೮೬೪, ರಲ್ಲಿ ಮುಗಿಯಿತು. ಈ ಚಿಲುಮೆಯನ್ನು ಅಗ್ರಿ-ಹಾರ್ಟಿಕಲ್ಚರಲ್ ಸೊಸೈಟಿ ಆಫ್ ವೆಸ್ಟರ್ನ್ ಇಂಡಿಯ', ರವರು, ನಿರ್ಮಿಸಿದರು. ನಿರ್ಮಾಣದ ಖರ್ಚು-ವೆಚ್ಚವನ್ನು, ಸೇಟ್ ಕುರ್ಸೆಟ್ ಜಿ ಫರ್ದೂನ್ ಜಿ ಪರೇಖ್, ರವರು ವಹಿಸಿಕೊಂಡರು. ಇದನ್ನು ಕಟ್ಟಲು ಬಳಸಿದ ಶಿಲೆ, ವಿದೇಶದಿಂದ ಆಮದು ಮಾಡಿಕೊಳ್ಳಲಾದ ಪೋರ್ಟ್ ಲ್ಯಾಂಡ್ ಸ್ಟೋನ್. ಈಗ ಅದಕ್ಕೆ ಬಿಳಿಯ ಆಯಿಲ್ ಪೇಂಟ್ ಬಳಿದಿದ್ದಾರೆ. ಕಟ್ಟಿದ ಮೇಲೆ, ಆಗಿನ ಬೊಂಬಾಯಿನ ಗವರ್ನರ್, 'ಸರ್ ಹೆನ್ರಿ ಬಾಟಲ್ ಫ್ರೇರ್' ರವರ ಹೆಸರನ್ನು 'ಕಾರಂಜಿ'ಗೆ ಇಡಬೇಕೆಂಬ ಏರ್ಪಾಟಾಗಿತ್ತು. ಆದರೆ,ಕೆಲವು ಕಾರಣಗಳಿಂದಾಗಿ, ಅನಾವರಣ ಮಾಡುವ ಮೊದಲೇ ನಿರ್ಧಾರ ಬದಲಾಗಿ, 'ಫ್ಲೋರಾ ಫೌಂಟೆನ್' ಎಂದು ಹೆಸರಿಸಲಾಯಿತು. ವಸಂತ ಕಾಲದ ಭವ್ಯ ಪ್ರಕೃತಿಯ ಸಂಭ್ರಮವನ್ನು ಪ್ರತಿಪಾದಿಸುವ ಸೌಂದರ್ಯದ ಖಣಿಯಾದ ರೋಮನ್ ದೇವತೆಯ ಸ್ಮರಣಾರ್ಥವಾಗಿ ಕಾರಂಜಿಗೆ ಹೆಸರನ್ನು ಕೊಡಲಾಯಿತು. 'ಫ್ಲೋರಾ ಫೌಂಟೆನ್, ಸ್ಥಳ ಈಗಿನಂತೆ ಅಂದೂ ನಗರದ ಕೋಟೆ ಪ್ರದೇಶದ ಮಧ್ಯಭಾಗದಲ್ಲಿದ್ದು, ಆಕರ್ಷಣೆಯಕೇಂದ್ರವಾಗಿತ್ತು. ಈಗ, 'ಫ್ಲೋರಾ ಫೌಂಟೆನ್,' ವಲಯ, ಪ್ರಮುಖ ವ್ಯಾಪಾರ, ಉದ್ಯೋಗಗಳ ತಾಣವಾಗಿದೆ. ದಕ್ಷಿಣ ಮುಂಬಯಿ ನ ಕೋಟೆ ಪ್ರದೇಶದಲ್ಲಿರುವ 'ಫ್ಲೋರಾ ಫೌಂಟೆನ್' ಈಗಲೂ ಪ್ರಮುಖ-ಪ್ರೇಕ್ಷಣೀಯ ತಾಣಗಳಲ್ಲೊಂದಾಗಿದೆ == ಹುತಾತ್ಮ ಚೌಕ್ == ಪಕ್ಕದಲ್ಲೇ ಹುತಾತ್ಮರಿಗೆ ಸ್ಮಾರಕ,'ವನ್ನು ನಿರ್ಮಿಸಿದ್ದಾರೆ. ಮುಂಬಯಿ ಮಹಾರಾಷ್ಟ್ರದ ಜೊತೆಗೆ ಗುಜರಾಥ್ ರಾಜ್ಯವೂ ಸಹಿತ ಸೇರಬೇಕೆಂಬ ವಾದದಿಂದ 'ಸಂಯುಕ್ತ ಮಹಾರಾಷ್ಟ್ರ ಚಳುವಳಿ'ಯಲ್ಲಿ ಪೋಲೀಸರ ಗುಂಡಿನೇಟಿಗೆ ಬಲಿಯಾದ 'ಹುತಾತ್ಮ'ರಿಗೆ ಒಂದು ಸ್ಮಾರಕವನ್ನು ಅಲ್ಲಿ ನಿರ್ಮಿಸಿದ್ದಾರೆ. ಈ ಸ್ಥಳ ಇಂದಿಗೂ 'ಪರ್ಯಟಕರಿಗೆ' ಒಂದು ವಿಶೇಷ ಮಹತ್ವದ ಸ್ಥಾನವಾಗಿದೆ. == ಉಲ್ಲೇಖಗಳು ==